SSEF , Bengaluru , a non profit films production organisation , dedicated to spread Socio -Spiritual knowledge , simplified and presented in an easily understandable way through visual media for the common people. This , SSEF believes , would empower individuals to imbibe moral n ethical values to move forward in the spiritual path ; thus resulting in the evolution of a harmonious , cultured spiritual - Satwik - society .
" Loka samasta sukhino bhavantu " is the mantra of SSEF organisation . SSEF is striving hard to produce documentaries , short films , story based films , which are based on ancient scriptures , philosophical discourses , great teachings by saints , scholars n philosophers of both ancient n modern times.
SSEF is founded by H.T.Nagendra , an experienced Film Director , who decided to use his experience to this noble cause.
ವ್ಯಕ್ತಿಯ ಔನತ್ಯಕ್ಕಾಗಿ ತನ್ಮೂಲಕ ಸಮಾಜದ ಔನತ್ಯಕ್ಕಾಗಿ ಉತ್ಕೃಷ್ಟ ವಿಚಾರಗಳನ್ನು ದೃಶ್ಯ ಮಾಧ್ಯಮಗಳ ಮೂಲಕ ಜನರಿಗೆ ತಲುಪಿಸುವ ಉದ್ದೇಶ ಹೊಂದಿರುವ ಸಂಸ್ಥೆಯಾಗಿದೆ , ಎಸ್. ಎಸ್. ಇ. ಎಫ್, ಬೆಂಗಳೂರು ಸಂಸ್ಥೆ. ಕಿರು ಚಿತ್ರ, ಸಾಕ್ಷ್ಯ ಚಿತ್ರ, ಕಥೆ ಆಧರಿತ ಚಲನಚಿತ್ರಗಳ ಮೂಲಕ ವಿಶ್ವ ವಿಶಾಲವಾದ ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ವಿಚಾರಧಾರೆಗಳನ್ನು, ಚಿಂತನೆಗಳನ್ನು ಜನರಿಗೆ ಸುಲಭ ಗ್ರಾಹ್ಯವಾಗಿ ಮಾಡಿ, ಜನರಲ್ಲಿ ನೈತಿಕ, ಆಧ್ಯಾತ್ಮಿಕ ಭಾವನೆಗಳು ಸ್ಪುರಿಸಿ ಅವರ ಚಿಂತನೆಗಳು ಭಾವನೆಗಳು ವಿಶಾಲಗೊಳ್ಳುವಂತೆ ಮಾಡುವ ದಿಶೆಯಲ್ಲಿ ಶ್ರಮಿಸುವ ಸಂಸ್ಥೆಯಾಗಿದೆ ಎಸ್.ಎಸ್.ಇ. ಎಫ್ ( SSEF).
ಈ ಸಂಸ್ಥೆಯ ಸ್ಥಾಪಕರು ಚಲನಚಿತ್ರ ನಿರ್ದೇಶಕರಾದ ಹೆಚ್.ಟಿ.ನಾಗೇಂದ್ರ ಅವರು. ಚಲನಚಿತ್ರ ರಂಗದಲ್ಲಿ ಪಡೆದ ತಮ್ಮ ಅನುಭವವನ್ನು ಸದುದ್ದೇಶಕ್ಕಾಗಿ ಬಳಸಲು ನಿರ್ಧರಿಸಿ ಈ ಸಂಸ್ಥೆ ಸ್ಥಾಪಿಸಿ ನಿರ್ವಹಿಸುತ್ತಿದ್ದಾರೆ.
ಈ ದಿಸೆಯಲ್ಲಿ ಭಾರತದ ಮಹಾನ್ ಪುರುಷರಲ್ಲಿ ಒಬ್ಬರಾದ ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು ಅನುಸರಿಸಿ ಸಾಕ್ಷ್ಯ ಚಿತ್ರಗಳನ್ನು ಹಂತಹಂತವಾಗಿ ತಯಾರಿಸುತ್ತಿದ್ದಾರೆ.